Bray Wyatt  : WWE ಖ್ಯಾತಿಯ ಬ್ರೇ ವ್ಯಾಟ್ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಈ ಕುರಿತು ಟ್ರಿಪಲ್ ಎಚ್‌ ಸೋಷಿಯಲ್‌ ಮೀಡಿಯಾದ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೆ WWE ಅಧಿಕೃತವಾಗಿ ಕುಸ್ತಿ ಪಟುವಿನ ನಿಧನದ ಬಗ್ಗೆ ತಿಳಿಸುವ ಮೂಲಕ ಸಂತಾಪ ಸೂಚಿಸಿದೆ.


COMMERCIAL BREAK
SCROLL TO CONTINUE READING

ಹೌದು.. WWE ಹಾಲ್ ಆಫ್ ಫೇಮರ್ ಮೈಕ್ ರೊಟುಂಡಾ ಅವರು ಕರೆ ಮಾಡಿ ವಿಂಡ್‌ಹ್ಯಾಮ್ ರೊಟುಂಡಾ - ಬ್ರೇ ವ್ಯಾಟ್ ಇಂದು ಮುಂಜಾನೆ ಅನಿರೀಕ್ಷಿತವಾಗಿ ನಿಧನರಾದರು ಎಂಬ ದುರಂತ ಸುದ್ದಿಯನ್ನು ನಮಗೆ ತಿಳಿಸಿದರು ಎಂದು ಟ್ರಿಪಲ್ ಎಚ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ, WWE ಹೇಳಿದರು, ವಿಂಡ್‌ಹ್ಯಾಮ್ ರೊಟುಂಡಾ ಅವರು 36 ನೇ ವಯಸ್ಸಿನಲ್ಲಿ ಆಗಸ್ಟ್ 24 ರಂದು ನಿಧನರಾದರು ಎಂದು ತಿಳಿಸುವ ಮೂಲಕ ಸಂತಾಪ ಸೂಚಿಸಿದೆ.


69ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡಿಗರ ಕಮಾಲ್‌


ಬ್ರೇ ವ್ಯಾಟ್ ಅವರ ತಂದೆ ಮೈಕ್ WWE ನಲ್ಲಿ ಹೆಸರಾಂತ ಆಟಗಾರರಾಗಿದ್ದರು. ವ್ಯಾಟ್‌ನ ಚಿಕ್ಕಪ್ಪ ಬ್ಯಾರಿ ವಿಂಡ್‌ಹ್ಯಾಮ್ 1980 ರ ದಶಕ ಮತ್ತು 1990 ರ ದಶಕದ ಆರಂಭದಲ್ಲಿ ಅತ್ಯಂತ ಜನಪ್ರಿಯ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದರು. ರೊಟುಂಡಾ ಸಹೋದರ ಟೇಲರ್ ಸಹ ಕುಸ್ತಿ ಪಟು. \


ವಿಂಡ್‌ಹ್ಯಾಮ್ ರೊಟುಂಡಾ ಮಾಜಿ ಡಬ್ಲ್ಯೂಡಬ್ಲ್ಯೂಇ ಆಟಗಾರ್ತಿ ರಿಂಗ್ ಅನೌನ್ಸರ್ ಜೋಜೋ ಆಫರ್‌ಮ್ಯಾನ್‌ ಜೊತೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಎರಡು ಬಾರಿ WWE ಯೂನಿವರ್ಸಲ್ ಚಾಂಪಿಯನ್ ಮತ್ತು WWE ಚಾಂಪಿಯನ್ ಆಗಿದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.